Thursday 5 June 2014

ತಿಂಡಿಯ ತಯಾರಿ

ಅತೀ ಸಾಧಾರಣವಾದ ಹಾಗೂ ಹೆಚ್ಚಾಗಿ ಗೌಣವಾಗಿ ಪರಿಗಣಿಸಲ್ಪಡುವ ವಿಷಯಗಳಲ್ಲಿ ಸೌಂದರ್ಯವನ್ನು ಕಾಣುವುದು ಮತ್ತು ಚಿಕ್ಕ ಚಿಕ್ಕ ವಿಷಯಗಳನ್ನು ಉತ್ಕಟವಾಗಿ ಆನಂದಿಸುವ ಅಭ್ಯಾಸ ಫೋಟೋಗ್ರಫಿ ಹುಚ್ಚಿನ ಅತ್ಯಂತ ದೊಡ್ಡ ಲಾಭ. ಈ ವರ್ಷದ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ವಿದೇಶಿ ಚಲನಚಿತ್ರವಾಗಿ ಆಯ್ಕೆಯಾದ "ದಿ ಗ್ರೇಟ್ ಬ್ಯೂಟಿ" ಚಿತ್ರದ ಮೊದಲ ದೃಶ್ಯದಲ್ಲಿ ಜಪಾನಿನ ಪ್ರಯಾಣಿಕನೊಬ್ಬನು ರೋಮಿನ ಸೌಂದರ್ಯವನ್ನು ನೋಡುತ್ತಾ ಇರುವಂತೆಯೇ ಕುಸಿದು ಬಿದ್ದು ಸಾವನ್ನಪ್ಪುತ್ತಾನೆ. ಪ್ರಕೃತಿಯಲ್ಲಿ ಅಥವಾ ಕಲೆಯನ್ನು ನೋಡುತ್ತಾ ಅಪರಿಮಿತವಾದ ಭಾವಪರವಶತೆ ಉಂಟಾಗಿ, ಹೃದಯದ ಬಡಿತ ಏರಿ ಸಾವು ಸಂಭವಿಸುವುದನ್ನು ತೋರಿಸುವುದು ಆ ದೃಶ್ಯದ ಉದ್ದೇಶವಾಗಿತ್ತು ಎನ್ನುವುದು ನನಗೆ ಆ ಚಿತ್ರದ ಬಗ್ಗೆ ಓದಿದಾಗ ತಿಳಿದ ವಿಷಯ. ಇಂತಹ  ಅನಾರೋಗ್ಯಕ್ಕೆ ಸ್ಟೆನ್ದ್ಹಾಲ್ ಸಿಂಡ್ರೋಮ್ ಎಂಬ ಹೆಸರು. ಇದರ ಪರಿಣಾಮದ ಗಂಭೀರತೆಯನ್ನು ಸ್ವಲ್ಪ ಪಕ್ಕಕ್ಕಿಟ್ಟು ನೋಡಿದರೆ ಕಲೆಯನ್ನು ಆಸ್ವಾದಿಸುವ ಎಲ್ಲರಿಗೂ ಇದು ಒಂದು ಮಟ್ಟದಲ್ಲಿ ಇರುತ್ತದೆ ಹಾಗೂ ಫೋಟೋಗ್ರಾಫರ್ಸ್ ಗಳಿಗಂತೂ ಇದು ಸ್ವಲ್ಪ ಹೆಚ್ಚಿನ ಮಟ್ಟದಲ್ಲಿಯೇ ಇರಬೇಕೆಂಬುದು ನನ್ನ ನಂಬಿಕೆ.

ಕೆಲ ದಿವಸಗಳ ಹಿಂದೆ ನಾನು ಶಿರಸಿಯಲ್ಲಿರುವ ನನ್ನ ಮಾವನ ಮನೆಗೆ ಹೋಗಿದ್ದಾಗ ಬೆಕ್ಕು ಬಾವಿಗೆ ಬಿದ್ದಿರುವ ಹಿನ್ನಲೆಯಲ್ಲಿ ಗೌಜಿ ಗದ್ದಲಗಳ ಮಧ್ಯೆ ಬೆಳಕಾಯಿತು. ಬೆಕ್ಕನ್ನು ಹಾಗೋ  ಹೀಗೋ ಎತ್ತಿ ರಕ್ಷಿಸಿದ ಬಳಿಕ ಅಡುಗೆ ಮನೆ ಬಳಿ ಸುಳಿದಾದುತ್ತಿದ್ದಾಗ ಅಲ್ಲಿಯ ಬೆಳಕು ನನ್ನನ್ನು ಬಹಳವಾಗಿ ಆಕರ್ಷಿಸಿತು. ಅಲ್ಲಿ ರೂಪುಗೊಂಡಿದ್ದ ನೆರಳು ಬೆಳಕು ಪ್ರಖರ ಕಾಂಟ್ರಾಸ್ಟ್ ಮೂಡಿಸಿ ಸರ್ವೇ ಸಾಧಾರಣವಾದ ದಿನವನ್ನು ಸುಂದರವನ್ನಗಿಸಿತ್ತು. ಸೂರ್ಯನ ಕಿರಣಗಳು ಮೈ ಮೇಲೆ ಬರೀ ಔಟ್ ಲೈನ್ ಹಾಕಿರುವ ರೀತಿ ಕಾಣುತ್ತಿರುವುದನ್ನು ನೋಡುವುದೇ ಒಂದು ಮಜ. ಹಳ್ಳಿ ಮನೆಗಳಲ್ಲಷ್ಟೇ ನಾನು ಇಂತಹ ಚಂದವನ್ನು ನೋಡಿದ್ದು . ಕಪ್ಪು ನೆಲವೂ ಚಿತ್ರಗಳ ಅಂದವನ್ನು ಹೆಚ್ಚಿಸುವುದಕ್ಕೆ ಬಹಳ ಸಹಾಯ ಮಾಡುತ್ತದೆ. ಕ್ಯಾಮೆರ ಎತ್ತಿ ಕೂತವನಿಗೆ ಅಲ್ಲಿ ನಡೆಯುತ್ತಿದ್ದ ತಿಂಡಿಯ ತಯಾರಿ ಕಂಡಿದ್ದು ಹೀಗೆ -
[ Watch the photos in full screen in your computer screen for the best results ]

     ಮಾವಿನ ಹಣ್ಣಿನ ಸೀಸನ್ನಲ್ಲಿ ದಿನದ ಆರಂಭ ಮಾವಿನ ಹಣ್ಣಿನಿಂದಾಗದೆ ಬೇರೆ ಯಾವುದರಿಂದಾಗಲು ಸಾಧ್ಯ?


    ಒಲೆಗೆ ಬೆಂಕಿ ಬಿದ್ದೇ ಬಿಡ್ತು!


    "ಬಟಾಟೆ ಸಿಪ್ಪೆ ಸುಲಿದಷ್ಟು ಸುಲಭ" ಅಂತ ಹೇಳಬಹುದಾ ಹೇಗೆ?






          ಕರ್ಣಕಠೋರ ಮಿಕ್ಸಿ!
 

 



ಚಪಾತಿ, ಬಾಜಿ ಸವಿಯಲು ಸಿದ್ಧ.


1 comment: